BlogVernacular

ವೆಯಿಟ್ ಲಾಸ್ ಪಿಲ್ಸ್ ಮತ್ತು ಫ್ಯಾಟ್ ಬರ್ನರ್ ಗಳ ಬಗ್ಗೆ ಸತ್ಯ

[vc_row][vc_column][vc_column_text letter_spacing=””]ಅನೇಕ ತೂಕ ಕರಗಿಸುವ ಪರಿಹಾರಗಳಲ್ಲಿ, ಜನಪ್ರಿಯವಾದದ್ದು ತೂಕ ಕಡಿಮೆ ಮಾಡುವ ಮಾತ್ರೆಗಳು ಮತ್ತು ಔಷಧಗಳು. ಹೆಚ್ಚಿನವರ ಅಭಿಪ್ರಾಯವೇನೆಂದರೆ ” ಒಂದು ಮ್ಯಾಜಿಕ್ ಮಾತ್ರೆಯಿಂದ ತೂಕ ಇಳಿಸಿ ಸದೃಢ ಆಕಾರ ಪಡೆಯಬಹುದು ಎಂದು! ‘
ಅನೇಕ ಜನರು, ಈ ಕೊಬ್ಬು ಕರಿಗಿಸುವ ಮಾತ್ರೆಗಳ್ಳನೇ ಪವಾಡ ಪರಿಹಾರವೆಂದು ನಂಬಿದ್ದಾರೆ. ಇನ್ನು ಕೆಲವರು, ಈ ಗುಳಿಗೆಗಳಿಂದ ಪ್ರತಿ ವಾರ ಹಲವಾರು ಕಿಲೋಗಳನ್ನು ಕರಗಿಸಬಹುದೆಂದು ನಂಬಿದ್ದಾರೆ.
ಆದರೆ, ಇದು ಮಿಥ್ಯ! ಈ ಫ್ಯಾಟ್ ಬರ್ನರ್ ಗಳಿಂದ ನಮಗೆ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಲು ಶಾಶ್ವತ ಪರಿಹಾರ ಸಿಗುವುದಿಲ್ಲ. ಪ್ರಬಲ ಉತ್ತೇಜಕಗಳು, ಹಾರ್ಮೋನುಗಳು ಮತ್ತು ಕಿಣ್ವಗಳನ್ನು ಬಳಸಿ ಫ್ಯಾಟ್ ಬರ್ನರ್ ಗಳನ್ನು ತಯಾರಿಸಲಾಗುತ್ತದೆ.ಇವು ನಕಾರಾತ್ಮಕ ರೀತಿಯಲ್ಲಿ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮಾರುಕಟ್ಟೆಯಲ್ಲಿ ಇವುಗಳನ್ನು ಬೇರೆ ಬೇರೆ ಆಕರ್ಷಕ ಹೆಸರಿನಿಂದ ಮಾರಾಟ ಮಾಡುತ್ತಾರೆ. ಫ್ಯಾಟ್ ಬರ್ನರ್ಸ್, ಥೆರ್ಮೋ ಫಾರ್ಮುಲಸ್, ಮೆಟಾಬಾಲಿಕ್ ಬೂಸ್ಟರ್ಸ್, ರೆಡ್ಯೂಸನ್ಗ್ ಏಜೆಂಟ್ಸ್ ಇನ್ನು ಇತರ ಹೆಸರುಗಳಿಂದ ಕರೆಯಲ್ಪಡುತ್ತದೆ. ಹಲವಾರು ತಯಾರಕರು ತಮ್ಮ ಉತ್ಪನ್ನ ಗಳನ್ನೂ ನೈಸರ್ಗಿಕ ಪದಾರ್ಥ ಎಂದು ಜನಸಾಮಾನ್ಯರಿಗೆ ತಪ್ಪು ರೀತಿಯಲ್ಲಿ ಮಾರಾಟ ಮಾಡುತ್ತಾರೆ.
ಆರಂಭದಲ್ಲಿ ಕೆಲವು ಮಾತ್ರೆಗಳು ನಿಮ್ಮ ದೇಹದ ಮೇಲೆ ಕೆಲಸ ಮಾಡಬಹುದು, ಏಕೆಂದೆರೆ ನೀವು ಸಹಜವಾಗಿ ಫಲಿತಾಂಶ ನೋಡುವ ಆತುರದಲ್ಲಿ ನಿಮ್ಮ ಆಹಾರ ಸೇವನೆಯನ್ನ ನಿಯಮಿತಗೊಳಿಸುತೀರಿ.
ಪೂರಕಗಳು ಕೆಲಸಮಾಡುವ ರೀತಿ ಮತ್ತು ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತದೆ ಎಂಬುದು ಇಲ್ಲಿದೆ:.

  • ಈ ಪೂರಕಗಳು ಮೂತ್ರವರ್ಧಕ ಪರಿಣಾಮಗಳನ್ನ ಬೀರುತ್ತದೆ. ದೇಹದಲ್ಲಿರುವ ಹೆಚ್ಚಿನ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ ತೂಕ ಕಮ್ಮಿಯಾದಂತೆ ಎಂದು ತೋರಿಸುತ್ತವೆ.
  • ಇವು ಕೊಬ್ಬು ಕರಗಿಸಿ, ಶಕ್ತಿ ಹೆಚ್ಚಿಸುತ್ತದೆ ಹಾಗೂ ಹಸಿವು ಕಡಿಮೆ ಮಾಡುತ್ತದೆ. ಈ ಗುಳಿಗೆಗಳು ನಿಮ್ಮ ದೇಹದ ತಾಪಮಾನ ಮತ್ತು ಚಯಾಪಚಯವನ್ನು ಹೆಚ್ಚಿಸಿ ನೀವು ದಿನವಿಡೀ ಹೆಚ್ಚು ಕ್ಯಾಲೊರಿಗಳನ್ನು ಕರಿಗಿಸಲು ಸಹಾಯ ಮಾಡುತ್ತವೆ.
  • ಮೆದುಳಿನ ನ್ಯೂರೋ ಟ್ರಾನ್ಸ್ಮಿಟರ್ಗಳ ಕುಶಲತೆಯನ್ನು ಬದಲಾಯಿಸಿ, ಬಡಿತ ಹೆಚ್ಚಿಸುತ್ತದೆ. ಇದರಿಂದಾಗಿ ನೀವು ಕಡಿಮೆ ತೀವ್ರತೆಯ ವ್ಯಾಯಾಮ ಮಾಡಿದರು ಹೆಚ್ಚು ಬೆವರುವಿರಿ. ಕೆಲವು ವರದಿಗಳ ಪ್ರಕಾರ ಕೆಲವರಿಗೆ ಹೃದಯ ಘಾತದಿಂದ ಸಾವನ್ನು ಹೊಂದಿರುವ ಪ್ರಕಟಣೆಗಳು ಇವೆ. ಹಾಗಾಗಿ ಹೆಚ್ಚಿನ ಬಿಪಿ ಮತ್ತು ಹೃದಯ ಸಮಸ್ಯೆಗಳನ್ನುಹೊಂದಿರುವರು ಜಾಗುರುಕತೆ ವಹಿಸಬೇಕು.
  • ಈ ವಸ್ತುಗಳನ್ನು ನಿರಂತರ ಸೇವನೆಯಿಂದ ದೇಹದ ಸಾಮಾನ್ಯ ಕಾರ್ಯಚಟುವಟಿಕೆಯಲ್ಲಿ ಗೊಂದಲ ಉಂಟಾಗುತ್ತದೆ. ದೀರ್ಘಕಾಲದ ಬಳಕೆಯಿಂದ ಅದರ ಅವಲಂಬನೆಗೆ ಒಳಗಾಗುತ್ತೀರಿ.
  • ಕೊಬ್ಬುನಿಂದ ಜೀರ್ಣವಾಗುವ ಪೋಷಕಾಂಶಗಳಾದ ವಿಟಮಿನ್ ಎ, ಡಿ, ಇ ಮತ್ತು ಕೆ ಯ ಹಸ್ತಕ್ಷೇಪದಿಂದ ಪೌಷ್ಟಿಕ ಕೊರತೆಗಳು ಮತ್ತು ಇತರ ಸಂಬಂಧಿತ ರೋಗಗಳಾಗಬಹುದು. ದೇಹದಲ್ಲಿ ಸೋಂಕನ್ನು ಹೋರಾಡುವ ನೈಸರ್ಗಿಕ ಶಕ್ತಿ ಕಡಿಮೆಯಾಗುತ್ತದೆ . ಇನ್ನು ಇತರ ಸಾಮಾನ್ಯ ಅಡ್ಡ ಪರಿಣಾಮಗಳೆಂದರೆ ತಲೆ ನೋವು ಮತ್ತು ದೇಹದಲ್ಲಿ ಗೆಡ್ಡೆಗಳು.
  • ಅನೇಕ ಅಧ್ಯಯನಗಳ ವರದಿಯಂತೆ ಫ್ಯಾಟ್ ಬರ್ನರ್ ಗಳಿಂದ ಮತ್ತು ತೂಕ ನಷ್ಟ ಪೂರಕ ಬಳಸುವುದರಿಂದ ಪ್ರಮುಖ ಅಂಗಗಳಾದ ಮೂತ್ರಪಿಂಡ, ಪಿತ್ತಜನಕಾಂಗ ಮತ್ತು ಹೃದಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ.

ಇನ್ನೊಂದು ವಾಸ್ತವವೇನೆಂದರೆ, ಈ ಮಾತ್ರೆಗಳು, ಸಿರಪ್ಗಳು ಅಥವಾ ಪುಡಿ ಗಳಿಂದ ಕೇವಲ ಅಲ್ಪಾವಧಿ ಪರಿಣಾಮ ಸಿಗುವುದು ಆದರೆ ಧೀರ್ಘಾವಧಿಯಲ್ಲಿ ಇದು ಕೆಲಸ ಮಾಡುವುದಿಲ್ಲ. ಅನೇಕ ಕಂಪನಿಗಳು ಪರ್ಯಾಯ ಹೆಸರುಗಳು ಬಳಸಿ ನಿಷೇಧಿಸಲಾಗಿದೆ ಪದಾರ್ಥಗಳನ್ನು ಉಪಯೋಗಿಸಿ ತಮ್ಮ ಉತ್ಪನ್ನಗಳಿಂದ ಜನರಿಗೆ ಗೊಂದಲಕ್ಕೆ ನೂಕುತ್ತಾರೆ.
ನಿಮ್ಮ ವೈದ್ಯರನ್ನು ಭೇಟಿ ಮಾಡದೆ ಯಾವುದೇ ತೂಕ ನಷ್ಟ ಪೂರಕ ಅಥವಾ ಫ್ಯಾಟ್ ಬರ್ನರ್ ಗಳನು ಪ್ರಯತ್ನಿಸಬೇಡಿ. ಈ ಮಾತ್ರೆಗಳನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ತೆಗೆದುಕೊಳ್ಳಬೇಕು, ಏಕೆಂದರೆ, ಇದರಲ್ಲಿರುವ ಹಲವಾರು ವಸ್ತುಗಳನ್ನು ನಿಮ್ಮ ದೇಹಕ್ಕೆ ಸೂಕ್ತವಿಲ್ಲದೆ ಇರಬಹುದು.

ಸರಿಯಾದ ನಿರ್ಧಾರಗಳಿಂದ ನಿಮ್ಮ ಆರೋಗ್ಯವನ್ನು ನಿರ್ವಸಿಕೊಳ್ಳಿ ಮತ್ತು ಯಾವುದೇ ಶಾರ್ಟ್ಕಟ್ಗಳಿಗೆ ಆಕರ್ಷಣೆ ಆಗಬೇಡಿ. ನಿಮ್ಮ ಪೋಷಣೆ, ಜೀವನಶೈಲಿ ಬದಲಾವಣೆ ಮತ್ತು ವಾಡಿಕೆಯ ಜೀವನಕ್ರಮವನ್ನು ದೊಡ್ಡ ಮತ್ತು ದೀರ್ಘಾವಧಿ ಫಲಿತಾಂಶಗಳು ನೀಡುವ ವಿಷಯಗಳನ್ನು ಗಮನಿಸಿ .

ನಮ್ಮ ಪದ್ಧತಿಯ ಆಹಾರಕ್ರಮದ ಯೋಜನೆಯಲ್ಲಿ ಆರೋಗ್ಯಕರ ಆಹಾರದ ಆಯ್ಕೆ ಮಾಡಿಕೊಳ್ಳಿ. ಇಂದೇ ನಮ್ಮಲ್ಲಿ ನೊಂದಾಯಿಸಿಕೊಳ್ಳಿ.
ಲೇಖಕಿ: ಕೃಪಾ ಹಿರೇಮಠ್
ಕನ್ಸಲ್ಟೆಂಟ್, ನ್ಯೂಟ್ರಿಷನ್

ಅನುವಾದ: ಅಶ್ವಿನಿ ಸಾಗರ್

[/vc_column_text][/vc_column][/vc_row]